ಕೇಂದ್ರ ಲೋಕ ಸೇವಾ ಆಯೋಗದ ಮುಖ್ಯ ಪರೀಕ್ಷೆ (ಮೈನ್ಸ್) ಯಲ್ಲಿ ಕಾಪಿ ಹೊಡೆದ ಐಎಎಸ್ ಪ್ರೊಬೆಷನರಿ ಅಧಿಕಾರಿಯನ್ನು ಬಂಧಿಸಲಾಗಿದೆ. 2014ನೇ ಬ್ಯಾಚ್ ನ ಐಪಿಎಸ್ ಪ್ರೊಬೆಷನರಿ ಅಧಿಕಾರಿ ಸಫೀರ್ ಕರೀಮ್ ಚೆನ್ನೈನಲ್ಲಿ ಪರೀಕ್ಷೆ ಬರೆಯುವ ವೇಳೆ ಹೆಂಡತಿ ಜತೆ ಬ್ಲೂಟೂತ್ ಮೂಲಕ ಫೋನ್ ಸಂಪರ್ಕದಲ್ಲಿದ್ದ. ಹೆಂಡತಿ ಆ ಕಡೆಯಿಂದ ಉತ್ತರಗಳನ್ನು ಹೇಳುತ್ತಿದ್ದಳು ಎಂದು ತಿಳಿದು ಬಂದಿದೆ. ಸಫೀರ್ ಕರೀಮ್ ಕೇರಳ ಮೂಲದವನಾಗಿದ್ದು ಇದೀಗ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಬಂಧಿಸಲಾಗಿದೆ. ಹೈದರಾಬಾದ್ ನಲ್ಲಿರುವ ಹೆಂಡತಿಯ ಬಂಧನಕ್ಕೂ ಪೊಲೀಸರು ಯತ್ನಿಸುತ್ತಿದ್ದಾರೆ. ಕರೀಮ್ ಪ್ರೊಬೆಷನರಿ ಅಧಿಕಾರಿಯಾಗಿದ್ದು ತಿರುನಲ್ವೇಲಿ ಜಿಲ್ಲೆಯ ನಂಗುನೇರಿ ಉಪ ವಲಯದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ಕರೀಮ್ ಸಿವಿಲ್ ಸರ್ವೀಸ್ ಪರೀಕ್ಷೆ ಬರೆಯುವವರಿಗಾಗಿ ಕೋಚಿಂಗ್ ಸೆಂಟರ್ ಕೂಡ ತೆರೆದಿದ್ದ. ತಿರುವನಂತಪುರಂ, ಕೊಚ್ಚಿ, ಕ್ಯಾಲಿಕಟ್, ಭೋಪಾಲ್ ಮತ್ತು ಹೈದರಾಬಾದ್ ನಲ್ಲಿ ಇವುಗಳ ಶಾಖೆಗಳಿತ್ತು.
An IPS officer on probation was caught cheating while appearing for the Civil Services (Main) Examination in Chennai on Monday. Safeer Karim was caught using a Bluetooth device to speak to his wife, who dictated the answers.